ಜ್ಞಾನಯೋಗಿಯ ಆತ್ಮ ಸಂಪತ್ತು !!!
ಸಿದ್ದೇಶ್ವರರು ಅಸಂಖ್ಯ ಗುಣಸಾಗಾರ
ಆ ಸಾಗರದೊಳ್ ಕರುಣೆ, ಸನ್ಯಾಸಿಯ ಸರಳತೆ
ಆತ್ಮದೆತ್ತರಕ್ಕೆ ಚಿಂಬಿಸಿ,ಬದುಕಿನ ಅಮೃತ ಕಳಸವನ್ನೆರಿದವ
ಆತ್ಮದ ಚಿಲುಮೆಯಿಂದ ಜಗದ್ವಿಖ್ಯಾತಿ ಪಡೆದವರು!!
ನಾನು ನನ್ನದೆಂದು ಕೊರಗಿದವರಲ್ಲ
ದಾಸೋಹ ದಾಶ೯ನಿಕರೂ
ಗುರುಬಳಗವ ಒಟ್ಟಿಗೆ ಸೇರಿಸಿ
ಭಕ್ತಿಯ ಭಾವ ಸಿಂಪಡಿಸಿದವರು!
ತುಂಡ ಅಂಗಿಯ ವಿಜ್ರಂಭಣೆಯಿಂದ
ಜ್ಞಾನ ದಾಸೋಹವ ಎರಕಹೊಯ್ದವರು
ಪ್ರಕೃತಿಯ ಸಂಪನ್ನತೆಯಲ್ಲಿ, ಜ್ಞಾನ ತಪಸ್ಸಿನಲ್ಲಿ
ಸಂಸ್ಕ್ರತಿಯ, ಆದ್ಯಾತ್ಮದ ಪವಿತ್ರಗಂಗೆಯ ಸಂತಪಿ೯ಸಿದವರು!
ಕೋಟಿ ಜನಸಾಗಾರ ಮೆಚ್ಚಿಸಿದವರು
ದೇಹದ ಹಂಗನ್ನೇ ತೊರೆದು ಬದುಕಿದವರು
ಸಿರಿ ಸಂಪತ್ತನ್ನು ಬದಿಗೊತ್ತಿ ಸನ್ಯಾಸಿಯ ಗುಣಲೀಲೆಯ ಬದುಕಿ ತೋರಿಸಿದವರು
ಅವರೇ ಶತಮಾನದ ನಿಜ ವಿಶ್ವಮಾನವ...
No comments:
Post a Comment