ಭೂಧರೇಯ ಲಕ್ಷ್ಮಿ ಮೈ ನೆರೆತಗಾ
ತಾವರೆಹೂವಿನಂತೆ ಆಕಾಶಕ್ಕೆ ಶೆಡ್ಡು ಹೊಡೆದು ನಿಂತಾಗ
ಮೂಡಲಪಾಲ್ಯದ ಮೂಡನದಂತೆ ಬೇಸಿಗೆಯಲ್ಲಿ ಆಕಾಶಕ್ಕೆಲ್ಲಾ ಕೊಡಿ ಹಿಡಿದು ಹೂವ ಅರಳಿಸ್ಯಾಲೊ ತಾಯಿ ಲಕ್ಷ್ಮಿ ದೇವಿ.
ಬೇಸಿಗೆಯ ರಾತ್ರಿಯಲ್ಲಿ ಮಧುಮಗಳ ಶ್ರು0ಗಾರದಂತೆ ಶ್ರು0ಗರಿಸಿ ನಿಂತಾಲೋ ನಮ್ಮ ತಾಯಿ ಗೊರವನಹಳ್ಳಿ ಲಕ್ಷ್ಮಿ ದೇವಿ.
ಹುಣ್ಣಿಮೆಯ ಚಂದ್ರನ0ತೆ ಅಮವಾಸ್ಯೆಯ ಮಾರನೇ ದಿನ ಹೊಂಬೆಳಕ ಚೆಲ್ಲಿ ಹೂಗೆನ್ನೇಯ ಹಾಲಗೆನ್ನೇ ನಗುವ ಬಿಂಬಿಸ್ಯಾಲೋ ನನ್ನ ತಾಯಿ ಲಕ್ಷ್ಮಿ ದೇವಿ.
ಭೂರಮೇಯು ನಾಚಿ ನೊರಾಗಿ ನಮ್ಮ ಮಜವಾದ ಜೋಡಿಗೆ ಚುಂಬಿಸುವಂತೆ ಚಂದ್ರನ ಬೆಳಕ ಚೇಲ್ಲ್ಯಾಲೋ ನಮ್ಮೆಲ್ಲರ ತಾಯಿ ಅವಳೇ ಲಕ್ಷ್ಮಿ ದೇವಿ.
ಬಿಸಿಲಿನ ಬೇಗೆಯಲ್ಲಿ ಹೂವ ಚೆಲ್ಲಿ ಹೊಂಬಣ್ಣದ ಸೆರಗ ಬೀರ್ಯಾಲೋ,
ದೇವಲೋಕದ ಸೊಗಸಾದ ಚಿತ್ರಣ ನಮಗೆ ತೋರಿದಾಲೋ
ನಮ್ಮವ್ವ ಲಕ್ಷ್ಮಿ ದೇವಿ.
ಬೀದಿ ದೀಪದಲ್ಲಿ ಮೀರಿ ಮೀರಿ ಮಿಂಚಿ ವಜ್ರದ ಬೆಳಕು ತೊಟ್ಟು ಮಿಂಚ್ಯಾಲೋ.... ಮಿಂಚಿ ಬಿಗುತಿಯಾಗ್ಯಾಲೋ ನಮ್ಮ ತಾಯಿ.
ಚಂದ್ರನ ಅಂಗಳದಲ್ಲಿ ಹುಟ್ಟಿ ಮಂಗಳನ ಬಾಗಿಲಲ್ಲಿ ನಿಂತು ಸಿರಿ ಸಂಪತ್ತು ನಮಗೆಲ್ಲಾ ಹರಿಸ್ಯಾಲೋ ನಮ್ಮ ದೇವಿ ಲಕ್ಷ್ಮಿ ದೇವಿ.
ದೇವಲೋಕದ ಶ್ರು0ಗಾರದ ಹೂವ0ತೆ ನಮ್ಮ ಕಣ್ಣಿಗೆ srustiya ಸೊಬಗ ಬೀರ್ಯಾಲೋ ನನ್ನ ತಾಯಿ ಲಕ್ಷ್ಮಿ ದೇವಿ.
ಹೂವಿನ ಗಿಡದ ಹೆಸರು ಗೊತ್ತಿಲ್ಲ ದಯಮಾಡಿ ಕ್ಷಮಿಸಿ.
ಇಂತಿ ನಿಮ್ಮ ಭಾವಾಜೀವಿ.
No comments:
Post a Comment