Thursday, March 18, 2021

"ಬೇವಿನಹಳ್ಳಿ ಅಜ್ಜಾ ಮನದ ಗುರುವಿಗೆ ನಮನ"

 "ಬೇವಿನಹಳ್ಳಿ ಅಜ್ಜಾ ಮನದ ಗುರುವಿಗೆ ನಮನ"


" ರಂಟೆ ಕುಂಟೆಯ ಸರದಾರ

ದನಕರುಗಳ ಹೆಮ್ಮೆಯ ಸೊರ

ಹೊಲ ಗದ್ದೆಗಳ ಒಲುಮೆಗಾರ

ರಕ್ತ ಸಂಬಧದ ಚಲಗಾರ "


"ಗಟ್ಟಿ ಮುಷ್ಟಿಯ ಪೈಲ್ವಾನಾಗಿದ್ದ

ಚರಗಿಗಂಟಲೆ ಹಸಿಹಾಲ ಕುಡಿತಿದ್ದ 

ನಟ್ಟ ಕಡೆದು ಹೆಸರು ಮಾಡಿದ್ದ

ಪಣತೊಟ್ಟು ಕೊಡವಿ ನಿಂತಿದ್ದ!! 


ರಂಟಿ ಹೊಡೆದು ಗಟ್ಟಿಯಾಗಿದ್ದ

ಕುದುರೆಯನೇರಿದ ಗುರಿಕಾರನಾಗಿದ್ದ

ಹರಿದ ಬನೇನು ತೊಟ್ಟು ಮಿಂಚುತಿದ್ದ

ಸೈಕಲ್ಯೇರಿ ಓಡಾಡುತಲಿದ್ದ

ಅವನೇ ನಮ್ಮಜ್ಜ!!! 


ದೊಡ್ಡ ದೊಡ್ಡ ಕನಸ ಹೊತ್ತಿ ಬಂದಿದ್ದ

ಮುಂದಾಲೋಚನೆಯ ಗುರಿಕಾರನಾಗಿದ್ದ 

ಭರವಸೆಯ ಬೆಳಕ ಚೆಲ್ಲಿ ನಿಂತಿದ್ದ

ಸಾಕೆನ್ನುವ ಹಾಗೆ ಬೆಳೆದು ಬಾಗಿದನು!


ಬೇವಿನಹಳ್ಳಿಯ ಪ್ರಕ್ಯಾತ

ಬೆಂಚುಕಲ್ಲಿನಲ್ಲಿ ಹೊ-ಹೊನ್ನ ಬೆಳೆದಿದ್ದ

ಬೋರವೆಲ್ಲಿನಲ್ಲಿ ನೀರು ಹುಡುಕಿ ಚುಮ್ಮಿಸಿದ

ಬಂಗಾರದ ಜೆವನಕೆ ನಾಂದಿ ಪುರುಷನಾದ!!! 


ಮನೆ ಮಕ್ಕಳ ಉದ್ದರವೇ ಜೀವ ನದ ಸಾರ

ಬರಿಗೈಯಲ್ಲಿ ಬಂದು ಹೊನ್ನ ಕಳಸವ ಕೆತ್ತಿದ

ಬರಿಗಾಲಿನಲ್ಲಿ ಊರು-ಕೇರಿ ಸುತ್ತಿ ಸಂಬಂಧ ಗಟ್ಟಿಗೊಳಿಸಿದ್ದ!!! 


ಮೊಮ್ಮಕ್ಕಳೊಡನೆ ಲೊಳ್ಳಯಿಟ್ಟು

ಅಳಿಯ- ಮಾವಂದಿರ ಪ್ರೀತಿಯ ಹರಿಕಾರನಾಗಿ

ಛಲ ಬಿಡದೆ ಹಲವಾರು ಹೊಲ ಮಾಡಿ ಬೇವಿನಹಳ್ಳಿಗೆ ಹೆಸರಾಗಿದ್ದ!! 


ಗುರು - ಲಿಂಗ ಜಂಗಮರಂತೆ ಗುರುಗಂಗಾಧರನ

ಚಿಗುರಾಗಿ ಹೊಳೆಯಲಾರಂಬಿಸಿದ!!! 

ರೊಟ್ಟಿ ಬುತ್ತಿಯಲ್ಲಿ ಹೊನ್ನದಾಸೆಯ ಹೊತ್ತು

ಜನದಟ್ಟಿ ಮಲ್ಲನಂತೆ ಪುಟಿದೆದ್ದು ಬೆಳೆದ!!! 


ಒಂಟಿ ಅಕ್ಷರದಿಂದ ಯಾರನ್ನು ಮಾತನಾಡಿಸಿದವನಲ್ಲ 

ಅಕ್ಕ ಅಣ್ಣ ಎಂದು ಊರಿಗೆಲ್ಲ ಪಸರಿಸಿದ

ಹೊಲ ಗದ್ದೆಗಳ ಸ್ನೇಹಿತನಾಗಿ ಬಿಗುತಿದ್ದ! 

ಮಾಳಗಿ ಮನೆಯನ್ನು ಆರ್ಸಿಸಿ ಮಾಡಿ

ಹೊನ್ನ ಝರಿಯ ನಂದನವನ ಕೆತ್ತಿದ್ದ!!!

Tuesday, March 16, 2021

ಭೂಧರೇಯ ಲಕ್ಷ್ಮಿ ಮೈ ನೆರೆತಗಾ

 ಭೂಧರೇಯ ಲಕ್ಷ್ಮಿ ಮೈ ನೆರೆತಗಾ


ತಾವರೆಹೂವಿನಂತೆ ಆಕಾಶಕ್ಕೆ ಶೆಡ್ಡು ಹೊಡೆದು ನಿಂತಾಗ

ಮೂಡಲಪಾಲ್ಯದ ಮೂಡನದಂತೆ ಬೇಸಿಗೆಯಲ್ಲಿ ಆಕಾಶಕ್ಕೆಲ್ಲಾ ಕೊಡಿ ಹಿಡಿದು ಹೂವ ಅರಳಿಸ್ಯಾಲೊ ತಾಯಿ ಲಕ್ಷ್ಮಿ ದೇವಿ. 


ಬೇಸಿಗೆಯ ರಾತ್ರಿಯಲ್ಲಿ ಮಧುಮಗಳ ಶ್ರು0ಗಾರದಂತೆ ಶ್ರು0ಗರಿಸಿ ನಿಂತಾಲೋ ನಮ್ಮ ತಾಯಿ ಗೊರವನಹಳ್ಳಿ ಲಕ್ಷ್ಮಿ ದೇವಿ. 


ಹುಣ್ಣಿಮೆಯ ಚಂದ್ರನ0ತೆ ಅಮವಾಸ್ಯೆಯ ಮಾರನೇ ದಿನ ಹೊಂಬೆಳಕ ಚೆಲ್ಲಿ ಹೂಗೆನ್ನೇಯ    ಹಾಲಗೆನ್ನೇ ನಗುವ ಬಿಂಬಿಸ್ಯಾಲೋ  ನನ್ನ ತಾಯಿ ಲಕ್ಷ್ಮಿ ದೇವಿ. 


ಭೂರಮೇಯು ನಾಚಿ ನೊರಾಗಿ ನಮ್ಮ ಮಜವಾದ ಜೋಡಿಗೆ ಚುಂಬಿಸುವಂತೆ ಚಂದ್ರನ ಬೆಳಕ ಚೇಲ್ಲ್ಯಾಲೋ ನಮ್ಮೆಲ್ಲರ ತಾಯಿ ಅವಳೇ ಲಕ್ಷ್ಮಿ ದೇವಿ. 


ಬಿಸಿಲಿನ ಬೇಗೆಯಲ್ಲಿ ಹೂವ ಚೆಲ್ಲಿ ಹೊಂಬಣ್ಣದ ಸೆರಗ ಬೀರ್ಯಾಲೋ, 

ದೇವಲೋಕದ ಸೊಗಸಾದ ಚಿತ್ರಣ ನಮಗೆ ತೋರಿದಾಲೋ 

ನಮ್ಮವ್ವ ಲಕ್ಷ್ಮಿ ದೇವಿ.


ಬೀದಿ ದೀಪದಲ್ಲಿ ಮೀರಿ ಮೀರಿ ಮಿಂಚಿ ವಜ್ರದ ಬೆಳಕು ತೊಟ್ಟು  ಮಿಂಚ್ಯಾಲೋ.... ಮಿಂಚಿ ಬಿಗುತಿಯಾಗ್ಯಾಲೋ ನಮ್ಮ ತಾಯಿ. 


ಚಂದ್ರನ ಅಂಗಳದಲ್ಲಿ ಹುಟ್ಟಿ ಮಂಗಳನ ಬಾಗಿಲಲ್ಲಿ ನಿಂತು ಸಿರಿ  ಸಂಪತ್ತು ನಮಗೆಲ್ಲಾ  ಹರಿಸ್ಯಾಲೋ ನಮ್ಮ ದೇವಿ ಲಕ್ಷ್ಮಿ ದೇವಿ. 


ದೇವಲೋಕದ ಶ್ರು0ಗಾರದ ಹೂವ0ತೆ ನಮ್ಮ ಕಣ್ಣಿಗೆ srustiya ಸೊಬಗ ಬೀರ್ಯಾಲೋ ನನ್ನ ತಾಯಿ ಲಕ್ಷ್ಮಿ ದೇವಿ.  


ಹೂವಿನ ಗಿಡದ ಹೆಸರು ಗೊತ್ತಿಲ್ಲ ದಯಮಾಡಿ ಕ್ಷಮಿಸಿ. 

 

ಇಂತಿ ನಿಮ್ಮ ಭಾವಾಜೀವಿ.