"ಬೇವಿನಹಳ್ಳಿ ಅಜ್ಜಾ ಮನದ ಗುರುವಿಗೆ ನಮನ"
" ರಂಟೆ ಕುಂಟೆಯ ಸರದಾರ
ದನಕರುಗಳ ಹೆಮ್ಮೆಯ ಸೊರ
ಹೊಲ ಗದ್ದೆಗಳ ಒಲುಮೆಗಾರ
ರಕ್ತ ಸಂಬಧದ ಚಲಗಾರ "
"ಗಟ್ಟಿ ಮುಷ್ಟಿಯ ಪೈಲ್ವಾನಾಗಿದ್ದ
ಚರಗಿಗಂಟಲೆ ಹಸಿಹಾಲ ಕುಡಿತಿದ್ದ
ನಟ್ಟ ಕಡೆದು ಹೆಸರು ಮಾಡಿದ್ದ
ಪಣತೊಟ್ಟು ಕೊಡವಿ ನಿಂತಿದ್ದ!!
ರಂಟಿ ಹೊಡೆದು ಗಟ್ಟಿಯಾಗಿದ್ದ
ಕುದುರೆಯನೇರಿದ ಗುರಿಕಾರನಾಗಿದ್ದ
ಹರಿದ ಬನೇನು ತೊಟ್ಟು ಮಿಂಚುತಿದ್ದ
ಸೈಕಲ್ಯೇರಿ ಓಡಾಡುತಲಿದ್ದ
ಅವನೇ ನಮ್ಮಜ್ಜ!!!
ದೊಡ್ಡ ದೊಡ್ಡ ಕನಸ ಹೊತ್ತಿ ಬಂದಿದ್ದ
ಮುಂದಾಲೋಚನೆಯ ಗುರಿಕಾರನಾಗಿದ್ದ
ಭರವಸೆಯ ಬೆಳಕ ಚೆಲ್ಲಿ ನಿಂತಿದ್ದ
ಸಾಕೆನ್ನುವ ಹಾಗೆ ಬೆಳೆದು ಬಾಗಿದನು!
ಬೇವಿನಹಳ್ಳಿಯ ಪ್ರಕ್ಯಾತ
ಬೆಂಚುಕಲ್ಲಿನಲ್ಲಿ ಹೊ-ಹೊನ್ನ ಬೆಳೆದಿದ್ದ
ಬೋರವೆಲ್ಲಿನಲ್ಲಿ ನೀರು ಹುಡುಕಿ ಚುಮ್ಮಿಸಿದ
ಬಂಗಾರದ ಜೆವನಕೆ ನಾಂದಿ ಪುರುಷನಾದ!!!
ಮನೆ ಮಕ್ಕಳ ಉದ್ದರವೇ ಜೀವ ನದ ಸಾರ
ಬರಿಗೈಯಲ್ಲಿ ಬಂದು ಹೊನ್ನ ಕಳಸವ ಕೆತ್ತಿದ
ಬರಿಗಾಲಿನಲ್ಲಿ ಊರು-ಕೇರಿ ಸುತ್ತಿ ಸಂಬಂಧ ಗಟ್ಟಿಗೊಳಿಸಿದ್ದ!!!
ಮೊಮ್ಮಕ್ಕಳೊಡನೆ ಲೊಳ್ಳಯಿಟ್ಟು
ಅಳಿಯ- ಮಾವಂದಿರ ಪ್ರೀತಿಯ ಹರಿಕಾರನಾಗಿ
ಛಲ ಬಿಡದೆ ಹಲವಾರು ಹೊಲ ಮಾಡಿ ಬೇವಿನಹಳ್ಳಿಗೆ ಹೆಸರಾಗಿದ್ದ!!
ಗುರು - ಲಿಂಗ ಜಂಗಮರಂತೆ ಗುರುಗಂಗಾಧರನ
ಚಿಗುರಾಗಿ ಹೊಳೆಯಲಾರಂಬಿಸಿದ!!!
ರೊಟ್ಟಿ ಬುತ್ತಿಯಲ್ಲಿ ಹೊನ್ನದಾಸೆಯ ಹೊತ್ತು
ಜನದಟ್ಟಿ ಮಲ್ಲನಂತೆ ಪುಟಿದೆದ್ದು ಬೆಳೆದ!!!
ಒಂಟಿ ಅಕ್ಷರದಿಂದ ಯಾರನ್ನು ಮಾತನಾಡಿಸಿದವನಲ್ಲ
ಅಕ್ಕ ಅಣ್ಣ ಎಂದು ಊರಿಗೆಲ್ಲ ಪಸರಿಸಿದ
ಹೊಲ ಗದ್ದೆಗಳ ಸ್ನೇಹಿತನಾಗಿ ಬಿಗುತಿದ್ದ!
ಮಾಳಗಿ ಮನೆಯನ್ನು ಆರ್ಸಿಸಿ ಮಾಡಿ
ಹೊನ್ನ ಝರಿಯ ನಂದನವನ ಕೆತ್ತಿದ್ದ!!!